Bigg Boss Kannada Season 5 : ಚಂದನ್ ಶೆಟ್ಟಿಯ ಬೇಸರವನ್ನ ದೂರ ಮಾಡಿದ ಸುದೀಪ್ | Filmibeat Kannada

2017-11-07 501

Bigg Boss Kannada 5: Week-3: Sudeep Speaks to Rap Singer Chandan Shetty. Chandan Shetty was very sad because he was not getting good offers & Sudeep speaks to Chandan Shetty & convinces him.
ಚಂದನ್ ಶೆಟ್ಟಿ ಮನಸ್ಸಿನಲ್ಲಿದ್ದ ಬೇಸರವನ್ನ ಕಿತ್ತೆಸೆದ ಸುದೀಪ್! 'ಬಿಗ್ ಬಾಸ್' ಮನೆಯಲ್ಲಿ Rap ಸಿಂಗರ್ ಚಂದನ್ ಶೆಟ್ಟಿ ತಮ್ಮ ಹಾಡುಗಳ ಮೂಲಕ ಸಖತ್ ಎಂಟರ್ ಟೈನ್ ಮಾಡ್ತಿದ್ದಾರೆ. ಚಂದನ್ ಅವರ ಡಿಫ್ರೆಂಟ್ ಹಾಡುಗಳನ್ನ ಕೇಳಿ ಮನೆ ಸದಸ್ಯರು ಕೂಡ ಅಷ್ಟೇ ಎಂಜಾಯ್ ಮಾಡ್ತಿದ್ದಾರೆ.ಆದ್ರೆ, ಈ ಮಧ್ಯೆ ಚಂದನ್ ಶೆಟ್ಟಿ ''ಇಂಡಸ್ಟ್ರಿಯಲ್ಲಿ ತಮ್ಮ ಪ್ರತಿಭೆಗೆ ತಕ್ಕ ಮನ್ನಣೆ ಸಿಗುತ್ತಿಲ್ಲ, ನನ್ನನ್ನ ಯಾರು ಗುರುತಿಸುತ್ತಿಲ್ಲ'' ಎಂಬ ಬೇಸರವನ್ನ 'ಬಿಗ್' ಮನೆಯಲ್ಲಿ ಹೊರ ಹಾಕಿದ್ದರು. ಇದು ಅವರ ಅಭಿಮಾನಿಗಳಿಗೆ ಬೇಜಾರು ಮಾಡಿಸಿತು.
ಇದೇ ವಿಷ್ಯವನ್ನ ಸುದೀಪ್ ಕೂಡ ಪ್ರಸ್ಥಾಪಿಸಿದರು. ಚಂದನ್ ಶೆಟ್ಟಿ ಅವರ ಮನಸ್ಸಿನಲ್ಲಿದ್ದ ಭಾವನೆಯನ್ನ ಹೊಗಲಾಡಿಸಿ, ಚಂದನ್ ಗೆ ನೀತಿ ಪಾಠ ಹೇಳಿದ್ರು. ಹಾಗಿದ್ರೆ, ಚಂದನ್ ಶೆಟ್ಟಿಗೆ ಸುದೀಪ್ ಏನಂದ್ರು?''ಚಂದನ್ ಶೆಟ್ಟಿ ಅವರೇ ನಿಮ್ಮನ್ನ ಯಾರು ಗುರುತಿಸಿಲ್ಲ ಎಂದು ಹೇಳಿದ್ರಿ. ನಿಮ್ಮನ್ನ ಗುರುತಿಸಿರುವುದಕ್ಕೆ ನೀವು ಚಂದನ್ ಆಗಿರುವುದು. ನೀವು ಒಳಗೆ ಹೋಗಿರುವುದು. ನೀವು ಮಾಡಿದ ವಿಡಿಯೋ ಹೇಗೆ ಹಿಟ್ ಆಯ್ತು. ನೀವು ಗುರುತಿಸಿದ ಮೇಲೂ ಹೀಗೆ ಹೇಳಿದ್ರು ತಪ್ಪು'' ಎಂದು ಸುದೀಪ್ ಮನವರಿಕೆ ಮಾಡಿದ್ರು.

Videos similaires